ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು ವತಿಯಿಂದ ಆಯೋಜಿಸಿದ "ನಮ್ಮ ಆಯುಷ್ - ನಮ್ಮ ಸ್ವಾಸ್ಥ್ಯ" ಕಾರ್ಯಕ್ರಮದ ವರದಿ
ದಿನಾಂಕ -
08/09/2021
ಸ್ಥಳ - ಕುಕ್ಕರಹಳ್ಳಿ
ಕೇಂದ್ರ ಆಯುಷ್
ಮಂತ್ರಾಲಯ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ "ನಮ್ಮ ಆಯುಷ್ -
ನಮ್ಮ ಸ್ವಾಸ್ಥ್ಯ" ಕಾರ್ಯಕ್ರಮವನ್ನು ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವತಿಯಿಂದ ದಿನಾಂಕ 08/09/2021ರಂದು ಕುಕ್ಕರೆಹಳ್ಳಿ
ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.
ಗಜಾನನ ಹೆಗಡೆ,
ಡಯಟ್ ಪ್ರಾಂಶುಪಾಲೆ ಗೀತಾಂಬ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಈ ವೇಳೆ ಮಾತನಾಡಿದ
ಡಾ. ಗಜಾನನ ಹೆಗಡೆ, ವಿದ್ಯಾರ್ಥಿಗಳಿಗೆ
ಆಯುರ್ವೇದ ಮತ್ತು ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸಿದರು.
ಶಾಲಾ
ಮುಖ್ಯಶಿಕ್ಷಕರಾದ ಕೃಷ್ಣಪ್ಪ,
ಶಿಕ್ಷಕರಾದ ಭಾಗ್ಯಲಕ್ಷ್ಮಿ, ವಾಣಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಡಾ.
ವರ್ಷಾ ಕುಲಕರ್ಣಿ,
ಹಿರಿಯ ವೈದ್ಯಾಧಿಕಾರಿಗಳಾದ ಡಾ. ಭಾರತಿ ಹೀರೇಮಠ, ಸಹಾಯಕ
ಪ್ರಾಧ್ಯಾಪಕರಾದ ಡಾ. ಶಿಲ್ಪಾ.ಎಂ.ಎಸ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಜೀವನ ಶೈಲಿ
ನಿರ್ವಹಣೆ, ಯೋಗ ಪ್ರಾಣಾಯಾಮ ತಿಳುವಳಿಕೆ, ಮನೆ ಮದ್ದು ಬಗ್ಗೆ ಮಾಹಿತಿ, ಸ್ಥಳೀಯ ಆಹಾರ ಪದ್ಧತಿ - ಔಷಧಿ ಸಸ್ಯಗಳ ಪರಿಚಯ, ಕೋವಿಡ್-19ರ
ಪರಿಚಯ ಹಾಗೂ ನಿರ್ವಹಣಾ ಕಿರುಚಿತ್ರಣದ ಬಗ್ಗೆ ಪಾಯೋಗಿಕವಾಗಿ ಉಪನ್ಯಾಸ ನೀಡಿದರು.
No comments:
Post a Comment